ಶ್ರೀ ಶ್ರೀಶೈಲ ಜಗದ್ಗುರು
ವಾಗೀಶ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮೀಜಿ
ಶ್ರೀ ಮದ್ಗಿರಿರಾಜ ಸೂರ್ಯಸಿಂಹಾಸನಾಧೀಶ್ವರ ಶ್ರೀಶ್ರೀಶ್ರೀ 1008 ಶ್ರೀ ಶ್ರೀಶೈಲ ಜಗದ್ಗುರು
ವಾಗೀಶ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮೀಜಿ ಅವರು ವೀರಶೈವ ಧರ್ಮ ಧಾರ್ಮಿಕ
ಮುಖಂಡರಾಗಿ, ಸ್ವಾತಂತ್ರ್ಯ ಸಂಗ್ರಮದಲ್ಲಿ ಭಾಗವಹಿಸಿ ಮಹಾತ್ಮ ಗಾಂಧೀಜಿ ಅವರಿಗೆ
ನಿಕಟವರ್ತಿಗಳಾಗಿದ್ದರು. ವರಕವಿಗಳಾಗಿದ್ದ ಶ್ರೀವಾಗೀಶರು ಹಲವು ಗ್ರಂಥಗಳನ್ನು ಬರೆಯುವ ಮೂಲಕ
ಸಂಶೋಧಕರಾಗಿ, ಆಯುರ್ವೇದಲ್ಲಿ ಪಾಂಡಿತ್ಯ ಪೂರ್ಣವಾದ ಗ್ರಂಥವನ್ನು ಬರೆದಿದ್ದಾರೆ. ಭಾರತದ
ಧಾರ್ಮಿಕ ಕೇಂದ್ರಗಳಲ್ಲಿ ಶ್ರೀಶೈಲವನ್ನು ವಿಶ್ವಭೂಪಟದಲ್ಲಿ ಬರುವಂತೆ ಅಹರ್ನಿಷಿ ಶ್ರಮಿಸಿದವರು.
ಬದುಕಿನ ಸರ್ವಾಂಗೀಣ ಅಭಿವೃದ್ಧಿಗೆ ಶಿಕ್ಷಣ ವಹಿಸುವ ಪಾತ್ರವನ್ನು ಮನಗಂಡಿದ್ದ ಶ್ರೀವಾಗೀಶರು
ಗ್ರಾಮೀಣ ಪ್ರದೇಶವಾದ ಹರಿಹರದಲ್ಲಿ 1970ದಲ್ಲಿ “ಶ್ರೀ ಜಗದ್ಗುರು ಪಂಚಾಚಾರ್ಯ ವಿಶ್ವಧರ್ಮ
ವಿದ್ಯಾಪೀಠ(ರಿ),”ಸ್ಥಾಪಿಸಿ, ಗ್ರಾಮೀಣ ಮಕ್ಕಳಿಗೆ ಶಿಶುವಿಹಾರದಿಂದ ಹಿಡಿದು ಉನ್ನತಶಿಕ್ಷಣ
ದೊರೆಯುವಂತೆ ವಿವಿಧ ಶಿಕ್ಷಣ ಸಂಸ್ಥೆಗಳನ್ನು ಪ್ರಾರಂಭಿಸಿದರು. 1972ರಲ್ಲಿ ಸ್ಥಾಪನೆಯಾದ ಶ್ರೀಶೈಲ
ಶಿಕ್ಷಣ ಮಹಾವಿದ್ಯಾಲಯವು ಇಡೀ ರಾಜ್ಯದಲ್ಲೇ ಉನ್ನತ ಗುಣಮಟ್ಟದ ಶಿಕ್ಷಣಕ್ಕೆ ಹೆಸರಾಗಿದೆ. ಇವರು
ಲಿಂಗೈಕ್ಯರಾದ ನಂತರ ಇವರ ಕರಸಂಜಾತರಾಗಿದ್ದ ಶ್ರೀಶೈಲ ಜಗದ್ಗುರು ಉಮಾಪತಿ ಪಂಡಿತಾರಾಧ್ಯ
ಶಿವಾಚಾರ್ಯ ಮಹಾಸ್ವಾಮಿಗಳವರು ಕೂಡ ಸಂಸ್ಥಾಪಕ ಅಧ್ಯಕ್ಷರಂತೆ ಸಾಂಸ್ಥಿಕ ಉದ್ದೇಶಗಳನ್ನು
ಅಭಿವೃದ್ಧಿ ಪಡಿಸುವಲ್ಲಿ ಎಲ್ಲ ವಿದ್ಯಾಸಂಸ್ಥೆಗಳಿಗೆ ಸಮಕಾಲೀನ ಅವಶ್ಯಕತೆಗಳನ್ನು ಕೊಡುವುದರ ಮೂಲಕ
ವಿದ್ಯಾಪೀಠವನ್ನು ಉತ್ತುಂಗಕ್ಕೇರಿಸುವಲ್ಲಿ ಇವರ ಶ್ರಮ ಅನನ್ಯವಾದುದು, ಸ್ಮರಣೀಯವಾದುದು.